Wednesday 7 June 2017

ನಾ ಮೀರಳೋ? ರಾಧೆಯೋ?



ಹಗಲು ರಾತ್ರಿ ಭಿನ್ನವೆನಿಸದು
ಕನಸಿನಲ್ಲಿ ಕಾಡಿ ಎಚ್ಚರಿಸುವಾಗ,
ಎದ್ದರೂ ಮೈಮರೆಯುವಾಗ,
ಅಲ್ಲೆಲ್ಲೋ ಕೇಳಿದ ಕೊಳಲ ನಾದ..
ಮತ್ತೊಮ್ಮೆ ನವಿಲುಗರಿಯ ಸ್ಪರ್ಶ
ತನ್ಮಯತೆಯ ಅನುಭವವು ಆವರಿಸಿತಾಗ!
ನೀಲ ಮೇಘ ವರ್ಣದವ ನೀನು
ಎಂದಿಗೂ ನಿಗೂಢ
ಇದ್ದುಬಿಡಲೇ ನಾ ಸಖಿಯಾಗಿ? ಪ್ರಿಯ ರಾಧೆಯಾಗಿ?
ಒಮ್ಮೊಮ್ಮೆ ದೇವಕಿಯಾಗಿ!?
ನಾ ಮೀರಳೋ, ಭಾಮೆಯೊ?
ಅರಿವ ಆಸೆ ಎನಗಿಲ್ಲ.
ಕಡಲ ನೀರಿನಲ್ಲಿ ಬಿಂಬ ಹುಡುಕುವ ಹಂಬಲವೆನಗಿಲ್ಲ
ಆ ಪ್ರತಿ ಅಲೆಯಲ್ಲೂ ನಾ ಕಾಣಬೇಕು!
ಆ ಭಾವದಲ್ಲೇ ಬಂಧಿಯಾಗಬೇಕು!
ಅಲ್ಲಿಯೇ ಲೀನವಾಗಬೇಕು!

~ಶರಧಿ

2 comments:

  1. ಬರಿಯ ಮೇಲ್ಪದರದ ಬಿಂಬವಾಗೋ ಹಂಬಲವೇನಿಲ್ಲ , ತಳದ ಸನ್ನಿಧಾನದಿ ಇದ್ದುಬಿಡುವೆ ಧ್ಯಾನಸ್ಥ ಮೂರ್ತಿಯಂತೆ!

    ಇಲ್ಲಿ ಬಹುಶಃ ಈ ಅಮೂರ್ತ ಭಾವದ ಪರಿಕಲ್ಪನೆ ತನ್ನದೇ ಆದ ಹೊಸ ರೂಪು ಪಡೆದುಕೊಂಡಿದೆ .. ರಾಧೆ, ಮೀರಾ, ಭಾಮಾ, ಕೊನೆಗೆ ದೇವಕಿಯೂ ಆಗುವ ಬಯಕೆ.. ಬಹುಶಃ ಇವರೆಲ್ಲರೂ ಬಾಹ್ಯ ಜಗತ್ತಿಗೆ ಬೇರೆ ಬೇರೆ ವ್ಯಕ್ತಿಗಳು ; ಆದರೆ ಅಂತರಂಗದ ಭೂಮಿಕೆಯಲ್ಲಿ ಈ ಎಲ್ಲ ಪಾತ್ರಗಳು ಕೃಷ್ಣನೆಡೆಗೆ ವಾಲಿದವುಗಳು.. ಆಕಾರ ಹೆಸರು ಯಾವುದಾದರೂ ಇದ್ದುಬಿಡಲಿ ಅಥವಾ ಇರದೆಯೂ ಇರಲಿ ; ಅವನ ಸಾಂಗತ್ಯ ಬೇಕು ಅಷ್ಟೇ ಎಂಬಂಥ ಉತ್ಕಟತೆ ಈ ಎಲ್ಲ ಸಾಲುಗಳಲ್ಲಿ ಮೈದಾಳಿದೆ :) :) :)

    ReplyDelete
    Replies
    1. ನಿಜ ಆ ಉತ್ಕಟತೆಯ ಭಾವವೇ ಇಲ್ಲಿ ಪದಗಳ ರೂಪ ತಾಳಿದೆ :)

      Delete