ರಾಧಾ - ಮಾಧವ
ವರ್ಣನೆಗೆ ನಿಲುಕದ ಪ್ರೀತಿ ಭಾವ ಸಾನಿಧ್ಯದ ಕ್ಷಣದಲಿ
ಮಾಧವನ ನೆನಪಿನ ಲಹರಿಯಲಿ
ತೇಲುತಿರುವ ಮನದಿ...
ಉನ್ಮಾದ ಪ್ರೀತಿಯ ಕುರುಹು
ಉತ್ಕಟ ಭಕ್ತಿಯ ಸುಳಿವು
ಉಚ್ಛ್ರುಂಖಲ ಭಾವದಲಿ ಬಂಧಿಸುವ ಸಾಹಸ ಕೈಗೂಡದು ರಾಧೆ!
ನಿನ್ನೊಳಗಿನ ಮಾಧವ ಅವನೇ!
ಅವನೊಳಗಿನ ರಾಧೆಯು ನೀನೆ!