ಈ ಕಾನನದ ಕುಸುಮಕೆ
ಬೆಂಕಿಯ ಹೊತ್ತಿಸಿದೆಯಾ
ದಾರಿಹೋಕ
ಸುಗಂಧದ ಆಸ್ವಾದ ಬೇಕಿರಲಿಲ್ಲ
ನಿನಗೆ!
ಉಜ್ವಲದ ಜ್ವಾಲೆಯದೋ
ನಿನಗೆ ಉಡುಗೊರೆ
ಪ್ರಜ್ವಲಿಸಿತು ಕಣ್ಣಲ್ಲಿ,ಮೈಯಲ್ಲಿ!
ಉರಿದು ಕೆಂಡವಾದ ನನಗೆ
ಮತ್ತೆ ಚಿಗುರುವ ಆಸೆ
ಆ ದುಂಬಿಯೇ ಜೊತೆಗಾರ
ಸುತ್ತಿಸಿ ಮುದ್ದಿಸಿ
ಮತ್ತೆಲ್ಲೋ ಅಂಕುರಿಸಿದೆ;
ಬೆಳೆದು ಹೆಮ್ಮರವಾದೆ!
ಮತ್ತದೇ ದಾರಿಹೋಕನಿಗೆ
ನೆರಳಾದೆ.
Pic: internet
Sharadhi it's the best one!
ReplyDeleteThank you :) the best is yet to come ;)
Deletelit up the fire which is inspiring you to pen down your thoughts... love. to my lovely sis.
ReplyDeleteSure anna ❤
Delete